Anil's MENU

ಹೊಸ ವರ್ಷದ ಶುಭಾಷಯಗಳು 2012
ಈ ಹೊಸ ವರ್ಷದಲಿ..
ನಿಮ್ಮ ಎಲ್ಲಾ ಕನಸುಗಳು ನನಸಾಗಲಿ,
ಹೊಸ ಕಾರ್ಯಗಳು ನಿಮ್ಮಿಂದ ಆರಂಭವಾಗಲಿ,
ಯಶಸ್ಸು ನಿಮ್ಮದಾಗಲಿ,
ನಿಮ್ಮ ಕೀರ್ತಿಯು ಉತ್ತುಂಗಕ್ಕೇರಲಿ
..ಎಂದು ಎದೆತುಂಬಿ ಹಾರೈಸುವೆ..

ಡಾ. ವಿಷ್ಣುವರ್ಧನ್


ಹೊಸ ವರ್ಷದ ಶುಭಾಷಯಗಳು 2012
ಈ ಹೊಸ ವರ್ಷದಲಿ..
ನಿಮ್ಮ ಎಲ್ಲಾ ಕನಸುಗಳು ನನಸಾಗಲಿ,
ಹೊಸ ಕಾರ್ಯಗಳು ನಿಮ್ಮಿಂದ ಆರಂಭವಾಗಲಿ,
ಯಶಸ್ಸು ನಿಮ್ಮದಾಗಲಿ,
ನಿಮ್ಮ ಕೀರ್ತಿಯು ಉತ್ತುಂಗಕ್ಕೇರಲಿ
..ಎಂದು ಎದೆತುಂಬಿ ಹಾರೈಸುವೆ..

ಡಾ. ವಿಷ್ಣುವರ್ಧನ್

ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ ೧೯೫೨ | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.
ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು.
ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೊದಲ ಚಿತ್ರ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು.
ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿದೆ.
ನಟನೆಯಲ್ಲದೇ,ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿ೦ಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆಗಾಯನವನ್ನೂ ಕೂಡ ಮಾಡಿದ್ದಾರೆ,ವಿಷ್ಣುವರ್ಧನ್ - ಸುಹಾಸಿನಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯಾಗಿ ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿಗೆ ಅವರಿಗೆ ಸಲ್ಲುತ್ತದೆ. ಬಂನ್ನಂಜೆ ಗೋವಿಂದಾಚಾರ್ಯಾರು ಇವರ ಆದ್ಯಾತ್ಮಿಕ ಗುರುವಾಗಿದ್ದರು,ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ನ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು.
೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಧಾರಾವಾಹಿ 'ಮಾಲ್ಗುಡಿ ಡೇಸ್'ನ ಕಂತೊಂದರಲ್ಲಿ (ರುಪೀಸ್ ಫಾರ್ಟಿ-ಫೈವ್ ಎ ಮಂತ್) ವಿಷ್ಣುವರ್ಧನ್ ನಟಿಸಿದ್ದರು
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು.

